ಶ್ರಾವಣ ಮಾಸದ ಪೂಜೆಯ ತಾಂಬೂಲದಲ್ಲಿ ಇರಲೇಬೇಕಾದ ವಸ್ತುಗಳಿವು | Boldsky Kannada

2020-07-31 22

ಶ್ರಾವಣ ಮಾಸ ಬಂದರೆ ಸಾಲು ಆಷಾಢದ ಜಡ್ಡುತನ ಮಾಯವಾಗಿ ಮನಸ್ಸಿನಲ್ಲಿ ಏನೋ ನವ ಉತ್ಸಾಹ. ವ್ರತ, ಸಾಲು-ಸಾಲಾಗಿ ಬರುವ ಹಬ್ಬಗಳು ಇವುಗಳಿಂದಾಗಿ ಶ್ರಾವಣ ಮಾಸವೆಂದರೆ ಸಡಗರ-ಸಂಭ್ರಮದ ಮಾಸ. ಶ್ರಾವಣದಲ್ಲಿ ಮಂಗಳ ಗೌರಿ ಪೂಜೆ, ನಾಗರ ಪಂಚಮಿ, ವರಮಹಾಲಕ್ಷ್ಮಿ ಪೂಜೆ ಹೀಗೆ ಅನೇಕ ಹಬ್ಬಗಳು ಬರುತ್ತವೆ. ಇನ್ನು ಕೆಲ ಮಹಿಳೆಯರು ಶ್ರಾವಣ ಶುಕ್ರವಾರದಂದು ವ್ರತ ಮಾಡಿ ಲಕ್ಷ್ಮಿ ಪೂಜೆ ಮಾಡಿ ಮುತ್ತೈದೆಯರನ್ನು ಅರಿಶಿಣ ಕುಂಕುಮಕ್ಕೆ ಕರೆಯುತ್ತಾರೆ. ಮುತ್ತೈದೆಯರಿಗೆ ಅರಿಶಿಣ-ಕುಂಕುಮ ಕೊಡುವುದರಿಂದ ಒಳ್ಳೆಯದಾಗುತ್ತದೆ, ಸಂತಾನ ಬಯಸುವ ದಂಪತಿಗೆ ಮಕ್ಕಳಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.

#Shravanmasa #shravanmasa2020 #shravanmasathamboolam #shravanmasatambula